Chief Editor
Manohar. R (Manu)
Photo Journalist
chitrataramanu@gmail.com
+91 9845549026
ಸೆಕೆಂಡ್ ಲೈಫ್ ಕರುಳುಬಳ್ಳಿಯ ಹಿಂದೆ ಬಿದ್ದವರು - 3/5 ***
Posted date: 04 Sun, Dec 2022 11:18:16 AM
ಕ್ಯಾನ್ಸರ್ ಖಾಯಿಲೆಯನ್ನು ಗುಣಪಡಿಸುವ ಅದ್ಭುತ ಶಕ್ತಿ  ಇರುವ, ತಾಯಿ-ಮಗುವಿನ ಸಂಬಂಧಕ್ಕೆ ಕೊಂಡಿಯಾದ ಕರುಳುಬಳ್ಳಿಗಿದೆ ಎನ್ನುವುದು ವೈದ್ಯಕೀಯವಾಗಿ ಈಗಾಗಲೇ ಸಾಬೀತಾಗಿದೆ. ಮಗು ಜನಿಸಿದ ಕೆಲವೇ ದಿನಗಳಲ್ಲಿ ತಾಯಿಯ ದೇಹದಿಂದ  ಕರುಳಬಳ್ಳಿಯು  ಕಳಚಿ ಬೀಳುತ್ತದೆ. ಅದನ್ನು  ಇತ್ತೀಚೆಗೆ ಕ್ಯಾನ್ಸರ್ ಗುಣಪಡಿಸುವ ಔಷದಿಯಲ್ಲಿ ಬಳಸಿಕೊಳ್ಳಲಾಗುತ್ತದೆ.  ಈಗ ಇದೇ ಕಂಟೆಂಟ್  ಮೇಲೆ  ಹೆಣೆಯಲಾಗಿರುವ ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿದ ಚಿತ್ರ ಸೆಕೆಂಡ್ ಲೈಫ್. 
 
ಇಂಥ ಪ್ರಯತ್ನ ತೆರೆಮೇಲೆ ಮಾಡಿರುವುದು ತೀರ ವಿರಳ ಎನ್ನಬಹುದು. ಕಥೆಯ ಬಗ್ಗೆ ಹೇಳಬೇಕೆಂದರೆ, ಚಿತ್ರದ ನಾಯಕಿ ನಯನ (ಸಿಂಧೂರಾವ್) ಆಶ್ರಮದಲ್ಲಿ ವಾಸಿಸುವ  ಅಂಧ ಹೆಣ್ಣುಮಗಳು, ಒಮ್ಮೆ ಆಕೆಯನ್ನು ನೋಡಿದ ನಾಯಕ ರೋಹಿತ್ (ಆದರ್ಶ ಗುಂಡೂರಾಜ್) ನಯನಳ ಸೌಂದರ್ಯಕ್ಕೆ ಮನಸೋತು ಆಕೆ  ಅಂಧಳಾಗಿದ್ದರೂ ಆಕೆಯ  ಕೈಹಿಡಿದು ಬಾಳು ಕೊಡುತ್ತಾನೆ. ನಂತರ ಅವರಿಗೆ ಮುದ್ದಾರ ಹೆಣ್ಣು ಮಗುವೂ ಜನಿಸುತ್ತದೆ. ನಯನ ತನ್ನ ಮಗುವನ್ನು ಕಣ್ಣಾರೆ ನೋಡಬೇಕು, ಪ್ರಪಂಚದ ಸೌಂದರ್ಯ ಸವಿಯಬೇಕೆ ಎಂಬ ಆಸೆಯಾಗುತ್ತೆ. ಹಿಂದೆ ಪತಿ ರೋಹಿತ್ ಸಾಕಷ್ಟು ಸಲ ಪ್ರಯತ್ನಿಸಿದರೂ ಆಪರೇಶನ್ ಮಾಡಿಸಿಕೊಳ್ಳಲು ಒಪ್ಪದ ನಯನ ಈಗ ತಾನಾಗೇ ಕಣ್ಣಿನ ಪೊರೆ  ಆಪರೇಶನ್‌ಗೆ ಮುಂದಾಗುತ್ತಾಳೆ, ಆಪರೇಶನ್ ಯಶಸ್ವಿಯಾದರೂ ಸ್ಪಷ್ಟವಾಗಿ ಕಣ್ಣು ಕಾಣಿಸಲು ಸ್ವಲ್ಪ ಸಮಯ ಬೇಕೆಂದು ವೈದ್ಯರು ಹೇಳುತ್ತಾರೆ. 
 
ಹೀಗಿರುವಾಗ  ಆ ಸುಂದರ ಕುಟುಂಬದಲ್ಲಿ ಒಮ್ಮೆ  ಆಗಂತುಕ(ಡೇವಿಡ್)ನೊಬ್ಬ ಎಂಟ್ರಿ ಕೊಡುವ ಮೂಲಕ ಬಿರುಗಾಳಿಯೆಬ್ಬಿಸುತ್ತಾನೆ. ರೋಹಿತ್‌ನ ಶಕ್ತಿ ಸಾಮರ್ಥ್ ಕಂಡ ಆತ ತನ್ನ ಕಾರ್ಯಕ್ಕೆ ರೋಹಿತ್‌ನನ್ನು ದಾಳವಾಗಿ ಬಳಸಿಕೊಳ್ಳಲು ಮುಂದಾಗುತ್ತಾನೆ. ಮೊದಲು ರೋಹಿತ್ ಒಪ್ಪದಿದ್ದಾಗ ಮಗಳನ್ನು ಕೊಲ್ಲುವುದಾಗಿ ಬ್ಲಾಕ್‌ಮೇಲ್ ಮಾಡುತ್ತಾನೆ. ಅನಿವಾರ್ಯವಾಗಿ ಡೇವಿಡ್ ಹೇಳಿದ ಕೆಲಸ ಮಾಡಲು ಒಪ್ಪುವ ರೋಹಿತ್ ಆತನಜೊತೆ ಜೊರಡುತ್ತಾನೆ.  ಬಂಗಲೆಯೊಂದರ ಮುಂದೆ ಕಾರು ನಿಲ್ಲಿಸಿದ ಡೇವಿಡ್ ಆ ಮನೆಯಲ್ಲಿರುವ ಮುಖ್ಯವಾದ ಪತ್ರವೊಂದನ್ನು ತರಬೇಕೆಂದು ಡೇವಿಡ್ ಕಳಿಸಿರುತ್ತಾನೆ. ಆ ಮನೆಯಲ್ಲೂ ಒಂದು ಕುಟುಂಬ ಇದ್ದು, ಅದನ್ನು ಮತ್ತೊಬ್ಬ ಆಗಂತುಕ ರುದ್ರ ತನ್ನ ಕೈವಶ ಮಾಡಿಕೊಂಡಿರುತ್ತಾನೆ. ಅಲ್ಲದೆ ಅವರನ್ನೆಲ್ಲ ಮನೆಯಲ್ಲೇ ಕಟ್ಟಿಹಾಕಿರುರುತ್ತಾನೆ. ರೋಹಿತ್  ಆ ಮನೆಗೆ  ಹೋಗಿರುವುದು, ರುದ್ರ ಆ ಮನೆಗೆ  ಹೋಗಿರುವುದು ಒಂದೇ ಉದ್ದೇಶಕ್ಕೆ, ಅವರಿಗೆ ಬೇಕಾದ ಪತ್ರ  ಆ ಮನೆಯ ಯಜಮಾನನ ವಶದಲ್ಲಿರುತ್ತದೆ,  ಕೊನೆಗೆ ಆ ಪತ್ರ ಯಾರ ಕೈ ಸೇರುತ್ತದೆ, ಅದರಲ್ಲಿ ಅಂಥ ವಿಷಯ ಏನಿರುತ್ತದೆ ಎನ್ನುವುದೇ ಚಿತ್ರದ ಕ್ಲೈಮ್ಯಾಕ್ಸ್. ನಿರ್ದೇಶಕ ರಾಜು ದೇವಸಂದ್ರ,  ಚಿತ್ರದಲ್ಲಿ ಕೊನೆಯವರೆಗೂ  ಕುತೂಹಲವನ್ನು ಕಾಯ್ದುಕೊಂಡು ಹೋಗುವಲ್ಲಿ ಯಶಸ್ವಿಯಾಗಿದ್ದಾರೆ. ಮುಂದೇನಾಗುತ್ತದೆ ಎಂದು ಊಹಿಸಲು ಸಾಧ್ಯವಾಗದಂತೆ ಕಥೆಯನ್ನು ಕಟ್ಟಿ ಕೊಟ್ಟಿದ್ದಾರೆ. ಚಿತ್ರದಲ್ಲಿ  ನಾಯಕ, ನಾಯಕಿ ಇಬ್ಬರಿಗೂ ಸೆಕೆಂಡ್‌ಲೈಪ್ ಸಿಗುತ್ತದೆ, ಅದು ಹೇಗೆ ಎಂದು ತಿಳಿಯಲು ನೀವು ಚಿತ್ರವನ್ನು ಥೇಟರಿನಲ್ಲೇ ವೀಕ್ಷಿಸಬೇಕು,  ನಾಯಕ ಆದರ್ಶ ಗುಂಡೂರಾಜ್ ಆಕ್ಷನ್ ಸೀನ್‌ಗಳಲ್ಲಿ ತುಂಬಾ ಕಷ್ಟಪಟ್ಟು ಎಫರ್ಟ್ ಹಾಕಿದ್ದಾರೆ. ನಾಯಕಿ ಸಿಂಧೂರಾವ್ ಅಂಧ ಗೃಹಿಣಿಯಾಗಿ ತನ್ನ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಮೊದಲ ಮಿಡಿತ ಹಾಡು ಸುಂದರವಾಗಿದ್ದು ಪದೇ ಪದೇ ಗುನುಗುವಂತಿದೆ. ಚಿತ್ರದಲ್ಲಿ ರಮೇಶ್ ಕೊಯಿರಾ ಅವರ ಕ್ಯಾಮೆರಾ ವರ್ಕ್, ಆರವ್ ರಿಶಿಕ್ ಅವರ ಬ್ಯಾಕ್‌ಗ್ರೌಂಡ್ ಮ್ಯೂಸಿಕ್  ಅದ್ಭುತವಾಗಿ ಮೂಡಿಬಂದಿದೆ. ಥ್ರಿಲ್ಲರ್ ಚಿತ್ರಗಳನ್ನು ಇಷ್ಟಪಡುವವರಿಗಂತೂ  ಈ ಚಿತ್ರ ಸಂಪೂರ್ಣ ಮನರಂಜನೆ ನೀಡುತ್ತದೆ,   ಈ ಚಿತ್ರವನ್ನು  ಜಯಣ್ಣ ಫಿಲಂಸ್ ಹಾಗೂ ಶುಕ್ರ ಫಿಲಂಸ್ ಸೇರಿ ನಿರ್ಮಾಣ ಮಾಡಿದ್ದಾರೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಸೆಕೆಂಡ್ ಲೈಫ್ ಕರುಳುಬಳ್ಳಿಯ ಹಿಂದೆ ಬಿದ್ದವರು - 3/5 *** - Chitratara.com
Copyright 2009 chitratara.com Reproduction is forbidden unless authorized. All rights reserved.